ಬೆಂಬಲಿಗರು

ಬುಧವಾರ, ಆಗಸ್ಟ್ 5, 2020

7th_std_english_part-1_rainbow_workbook_answers_2019-20.pdf

click here to download pdf

7th 1st sem ಕನ್ನಡ ನೋಟ್ಸ್

click here to download pdf

ಮೊದಲನೆಯ ತ್ರೈಮಾಸಿಕ ಅವಧಿಯ 6thಕನ್ನಡ ನೋಟ್ಸ್

click here to download pdf

5th ಕನ್ನಡ ನೋಟ್ಸ್

click here to download pdf

PARTS OF ANIMALS AND BIRD'S

click here to download pdf

ಮಂಗಳವಾರ, ಆಗಸ್ಟ್ 4, 2020

3ನೇ ತರಗತಿ ಕನ್ನಡ ನೋಟ್ಸ್

click here to download pdf

2ನೇ ತರಗತಿ ಕನ್ನಡ ನೋಟ್ಸ್

click here to pdf

4th STD ಕನ್ನಡ ನೋಟ್ಸ್

click here to download pdf

ಒಂದನೇ ತರಗತಿಯ ನೋಟ್ಸ್

click here to download pdf

ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಗೋಮರ್ಸಿ ಶಾಲೆಯ ವಠಾರ ಶಾಲೆಯ ಒಂದು ನೋಟ

ಶನಿವಾರ, ಆಗಸ್ಟ್ 1, 2020

ಒಂದನೇ ತರಗತಿಯ ಮಗು ಅಮ್ಮ ನಾನು ಶಾಲೆಗೆ ಹೋಗುತ್ತೇನೆ ಎಂದು ವಿವರಿಸುವ ಪರಿ ನೋಡಿ............ ಅಮ್ಮ ಕೊನೆಗೆ ಏನಂದಳು ಈ ಕೆಳಗಿನ ಅನಿಮೇಟೆಡ್ ವಿಡಿಯೋ ನೋಡಿ

click here to watch

ಚಂದನ ವಾಹಿನಿ ಪ್ರಸಾರ ಎಂಟನೇ ತರಗತಿಯ ಸಮಾಜ ವಿಜ್ಞಾನ ಪಾಠ

click here to watch

8th ಸಮಾಜ ವಿಜ್ಞಾನ ಚಂದನ ವಾಹಿನಿಯ ಪಾಠ ವೀಕ್ಷಣೆಗಾಗಿ 28 ಜುಲೈ

click here to watch

8th ಚಂದನ ವಾಹಿನಿಯಲ್ಲಿ ಸಮಾಜ ವಿಜ್ಞಾನ ಪಾಠ ವೀಕ್ಷಣೆಗಾಗಿ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ 24 ಜುಲೈ

click here to watch

ಚಂದನವಾಹಿನಿ 8th class ಸಮಾಜ ವಿಜ್ಞಾನ ಜುಲೈ 21

click here to watch

ಶುಕ್ರವಾರ, ಜುಲೈ 31, 2020

✋ *ಐದನೇ ತರಗತಿಯ ಎಲ್ಲಾ ಇಂಗ್ಲಿಷ್ ಪದ್ಯಗಳು ಒಂದೇ ಲಿಂಕ್ ನಲ್ಲಿ👇*

click here to watch

ಹತ್ತು ಅಂಶಗಳ ಮಾಹಿತಿ ಪುಸ್ತಕ pdf

click here to download pdf

4 ನೇ ತರಗತಿಯ ಎಲ್ಲಾ ಪದ್ಯಗಳ ವಿಡಿಯೋ ವೀಕ್ಷಣೆಗಾಗಿ

CLICK HERE TO WATCH

ಒಂದನೇ ತರಗತಿಯಿಂದ 5 ನೇ ತರಗತಿ ವರೆಗಿನ ವಿಡಿಯೋ ಪಾಠಗಳು ಮತ್ತು ಪದ್ಯಗಳು

click hear To watch

ಚಂದನ ವಾಹಿನಿಯಲ್ಲಿ ಬರುವ ಪಾಠಗಳ ವೀಕ್ಷಣೆಗಾಗಿ click here

ಚಂದನ ವಾಹಿನಿಯಲ್ಲಿ ಬರುವ ವಿಡಿಯೋ ಪಾಠಗಳ ವೀಕ್ಷಣೆಗಾಗಿ ಇಲ್ಲಿ ಕ್ಲಿಕ್ ಮಾಡಿ

ಗುರುವಾರ, ಜುಲೈ 30, 2020

CCE ಸಾಧನ ತಂತ್ರಗಳು ಮತ್ತು ಮಾನಕಗಳು

click here to download

ನೋಟುಗಳ ಸಂಗ್ರಹ

click here to download pdf

ಎಂಟನೇ ತರಗತಿ ಸಮಾಜ

click here to watch

ಬುಧವಾರ, ಜುಲೈ 29, 2020

ರಾಷ್ಟ್ರೀಯ ಶಿಕ್ಷಣ ನೀತಿ 2020

click to hear

4th ಕನ್ನಡ ಪರಿಹಾರ ಬೋಧನೆ

5ನೇ ತರಗತಿ ಕನ್ನಡ ಮಾದರಿ ಉತ್ತರ ಪತ್ರಿಕೆ

4ನೇ ತರಗತಿ ಕನ್ನಡ ಬಂದ ಪರೀಕ್ಷೆಯ ಪೂರ್ವ ಪರೀಕ್ಷೆ

5ನೇ ತರಗತಿಯ ಕನ್ನಡ ಸೇತುಬಂಧ ಪರೀಕ್ಷೆ ಗಳು ಸಾಮರ್ಥ್ಯಗಳ ಪಟ್ಟಿ ವಿವರ

ಏಳನೇ ತರಗತಿ ಸಮಾಜ ಸಾಫಲ್ಯ ಪರೀಕ್ಷೆ ಪ್ರಶ್ನೆಪತ್ರಿಕೆ

ಏಳನೇ ತರಗತಿಯ ಸಮಾಜ ಸೇತುಬಂಧ ಪೂರ್ವ ಪರೀಕ್ಷೆಯ ಉತ್ತರ ಪತ್ರಿಕೆ

7ನೇ ತರಗತಿ ಸಮಾಜ ಪೂರ್ವ ಪರೀಕ್ಷೆ

ಏಳನೇ ತರಗತಿ ಸಮಾಜ ಸೇತುಬಂಧ ಸಾಮರ್ಥ್ಯಗಳ ಪಟ್ಟಿ

ಏಳನೇ ತರಗತಿಯ ಕನ್ನಡ ಸೇತುಬಂಧ ಪರೀಕ್ಷೆ

ಶಿಕ್ಷಕರ ನೈಪುಣ್ಯತೆ ಹೆಚ್ಚಿಸಿಕೊಳ್ಳಲು ಕೋವಿಡ್ 19 ಸಂದರ್ಭದಲ್ಲಿ ಶಿಕ್ಷಕರು ನಿರ್ವಹಿಸಬೇಕಾದ ಕಾರ್ಯಚಟುವಟಿಕೆಗಳು

ಶಿಕ್ಷಕರ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಲು ಕೋವಿಡ್ ೧೯ ಸಂದರ್ಭದಲ್ಲಿ ಶಿಕ್ಷಕರು ನಿರ್ವಹಿಸಬಹುದಾದ ಕಾರ್ಯ ಚಟುವಟಿಕೆಗಳು.....

ಪೀಠಿಕೆ:
             ಅತ್ತ ಶಾಲೆಗೂ ಹೋಗಲಾಗದೇ ಇತ್ತ ಮಕ್ಕಳ ಕಲಿಕೆಗೂ ಅನುಕೂಲವಾಗದೇ ಗೊಂದಲಕ್ಕೀಡಾಗಿರುವ ಇಂತಹ ವಿಷಮ ಪರಿಸ್ಥಿತಿಯು ಮುಂದೆ ಎಂದೆಂದೂ ಬರುವುದು ಬೇಡ. ಮಾರ್ಚ ತಿಂಗಳಿನಿಂದ ಪ್ರಾರಂಭವಾದ ಮಹಾ ಮಾರಿ ಕೊರೋನಾ ನಾಲ್ಕು ತಿಂಗಳವರೆಗೆ ತನ್ನ ಅಟ್ಟಹಾಸ ಮೆರೆಯುತ್ತಾ ಬಂದಿದೆ. ಈಗಲೂ ಮುಂದುವರೆದಿದೆ ಇದರ ಅಂತ್ಯ ಯಾವಾಗ ಎಂಬ ಪ್ರಶ್ನೆ ನಮ್ಮ ಮುಂದಿದೆ. ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳುತ್ತಾ ಜನರು ಜೀವನ ಸಾಗಿಸುವಂತಾಗಿದೆ. ಹಾಗೆಯೇ ಮಕ್ಕಳು ಹೆಚ್ಚಿನ ಕಾಳಜಿಯಿಂದ ತಮ್ಮ ಬದುಕು ಕಟ್ಟಿಕೊಳ್ಳಬೇಕಾಗಿದೆ. ಜೀವನ ನಿಜವಾಗಿಯೂ ಅತ್ಯಂತ ದುಸ್ತರವಾಗಿದೆ.
         ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಶಾಲೆಗೆ ಬರುವುದಿರಲಿ ಮನೆ ಬಿಟ್ಟು ಹೊರಹೋಗದಂತಾಗಿದೆ. ಮಕ್ಕಳೆಲ್ಲ ಆಟವೂ ಇಲ್ಲದೇ ಪಾಠವೂ ಇಲ್ಲದೇ ಅತಂತ್ರ ಸ್ಥಿತಿಯಲ್ಲಿದ್ದಾರೆ. ಇದನ್ನರಿತ ಕೆಲ ಕ್ರಿಯಾಶೀಲ ಶಿಕ್ಷಕರು ಧೈರ್ಯದಿಂದ ಕೊರೋನಾಗೆ ಹೆದರದೇ ಮುನ್ನುಗ್ಗಿ ವಠಾರ ಶಾಲೆಯಂತಹ ಕಲ್ಪನೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ ಇನ್ನೂ ಕೆಲವು ಶಿಕ್ಷಕ ಬಾಂಧವರು ಚರ್ಚಿತ ಆನ್ ಲೈನ್ ತರಗತಿಗಳನ್ನ ನೀಡುತ್ತಿದ್ದಾರೆ. ವೆಬಿನಾರ ತಗತಿಗಳನ್ನು ನೀಡುತ್ತಿದ್ದಾರೆˌ ವಾಟ್ಸಪ್ ಗ್ರುಪ್ ಗಳ ಯೋಜನೆ ಹಾಕಿಕೊಂಡಿದ್ದಾರೆ. ಈಗ ಒಟ್ಟಾರೆ ಶಿಕ್ಷಕರು ಮನೆಯಲ್ಲಿಯೇ ಕುಳಿತುಕೊಂಡು ವಿಭಿನ್ನ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಶಿಕ್ಷಕರು ತಮ್ಮ ವೃತ್ತಿ ನೈಪುಣ್ಯತೆ ಹಾಗೂ ಮಕ್ಕಳ ಕಲಿಕಾಪೂರಕ ದೃಷ್ಟಿಯಿಂದ ಕೈಗೊಳ್ಳಬಹುದಾದ ಕೆಲವು ಚಟುವಟಿಕೆಗಳು:
ಶಿಕ್ಷಕ ಸದಾ ಜ್ಞಾನಾರ್ಜನೆಗಾಗಿ ವಿದ್ಯಾರ್ಥಿಯಾಗಿರಬೇಕು. ಆಗ ಮಾತ್ರ ಮಕ್ಕಳಿಗೆ ಹೆಚ್ಚಿನ ನ್ಯಾಯ ಒದಗಿಸಿಕೊಡಲು ಸಾಧ್ಯ.ನಾವು ನೀವೆಲ್ಲ ಅಂದುಕೊಂಡಂತೆ ಈಗಿನ ಪರಸ್ಥಿತಿ ಅಷ್ಟು ಸುಲಭವಾಗಿಲ್ಲ. ಅತ್ಯಂತ ಕಠಿಣ ಪರಿಸ್ಥಿತಿ ಬಂದೊದಗಿದೆ. ಕೊರೋನಾ ದಿನನಿತ್ಯ ಅಟ್ಟಹಾಸ ಮೆರೆಯುತ್ತಿದೆ. ಮಕ್ಕಳು ಹಾಗೂ ವಯಸ್ಸಾದವರು(೬೦ ವರ್ಷ ಮೇಲ್ಪಟ್ಟವರು) ರೋಗಿಗಳು ಹೊರಬರುವುದು ದುಸ್ತರವಾಗಿದೆ. ಹಾಗಾಗಿ ಶಿಕ್ಷಕರ ಕೆಲಸವೂ ಕೂಡ ಕಷ್ಟಕರವಾದರೂ ಕ್ರಿಯಾಶೀಲವಾಗಿರಬೇಕಾದದ್ದು ಅನಿವಾರ್ಯವಾಗಿದೆ.
         ಶಿಕ್ಷಕ ವೃಂದದವರು ತಾವು ಮನೆಯಲ್ಲಿದ್ದುಕೊಂಡು ಇಲ್ಲವೇ ಅನಿವಾರ್ಯ ಸ್ಥಳಗಳಿಗೆ ತೆರಳಿ ಕ್ರಿಯಾಶೀಲ ಕಾರ್ಯಗಳನ್ನ ಕೈಗೆತ್ತಿಕೊಳ್ಳಬೇಕಾಗಿದೆ. ಇದರಲ್ಲಿ ಇಲಾಖೆಯ ಗೌರವ ಮಕ್ಕಳ ಪ್ರಗತಿಯ ಕಾಳಜಿ ಅಡಗಿದೆ. ಯಾವಾಗ ಶಿಕ್ಷಕ ಆತ್ಮಮನೋಬಲದಿಂದ ಕಲಿಯಲು ಕಲಿಸಲು ಆರಂಭಿಸುವನೋ ಆಗ ಸಮಾಜಕ್ಕೂ ಇಲಾಖೆಗೂ ಲಾಭವಾಗುವುದು ಅತ್ಯಂತ ವಿಶ್ವಸನೀಯವಾಗುತ್ತದೆ. ಕಲಿಕೆ ಎನ್ನುವ ಪ್ರಕ್ರಿಯೆ "ಹುಟ್ಟಿನಿಂದ ಸಾಯುವವರೆಗೂ ನಿರಂತರವಾದದ್ದು" (ಹುಟ್ಟಿನಿಂದ ಚಟ್ಟದವರೆಗೆ) ಎಂಬ ವಾಡಿಕೆ ಕಟು ಸತ್ಯವಾಗಿದೆ. ಹೀಗಾಗಿ ಶಿಕ್ಷಕರು ಗಣಕಯಂತ್ರ ಮೊಬೈಲ್ ಲ್ಯಾಪ್ ಟಾಪ್ ಬಳಕೆಯನ್ನ ಅರಿತವರಾಗಬೇಕಾಗಿದೆ. ಅದರಿಂದ ವೃತ್ತಿಜೀವನದ ಅನೇಕ ಸಾಧನೆಯ ಮೆಟ್ಟಿಲುಗಳನ್ನ ಬೇಗ ತಲುಪಲು ಸಾಧ್ಯವಾಗುತ್ತದೆ.
ಶಿಕ್ಷಕ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಲು ಕೈಗೊಳ್ಳಬಹುದಾದ ಕೆಲವು ಕಾರ್ಯ ಚಟುವಟಿಕೆಗಳು ಈ ಕೆಳಗಿನಂತಿವೆ.
೧.ಕಥೆ ಕವನ ಲೇಖನಗಳನ್ನು ಬರೆಯುವ ಹವ್ಯಾಸ ರೂಢಿಸಿಕೊಳ್ಳುವುದು: 
ಶಿಕ್ಷಕರಾದವರು ಸದಾ ಓದುವ ವಿದ್ಯಾರ್ಥಿಯಾಗಿರಬೇಕು. ಹಾಗೆಯೇ ಕಥೆ ಕವನ ಲೇಖನಗಳನ್ನ ಬರೆಯುವ ಒಳ್ಳೆಯ ಹವ್ಯಾಸಗಳನ್ನ ಬೆಳೆಸಿಕೊಂಡರೆ ಅದು ಅವರನ್ನ ಸದಾ ಕ್ರಿಯಾಶೀಲರನ್ನಾಗಿ ಮಾಡುತ್ತದೆ. ಹೊಸ ಹೊಸ ಆಲೋಚನೆಗಳನ್ನು ಹುಟ್ಟು ಹಾಕುತ್ತದೆ. ಆಗಾಗ ನೇರವಾಗಿ ಅಲ್ಲದಿದ್ದರೂ ಮೊಬೈಲ್ ಮುಖಾಂತರ ಮೀಟ್ ಜೂಮ್ ಟೀಮ್ ತಂತ್ರಾಂಶದ ಮುಖಾಂತರ ಪಾಲ್ಗೊಳ್ಳಬಹುದು. ಅಲ್ಲಿ ಕಾವ್ಯ ವಾಚನ ಕಥಾ ನಿರೂಪಣೆ ಸಂವಾದಗಳಲ್ಲಿ ಭಾಗವಹಿಸಿ ತಮ್ಮ ಜ್ಞಾನಾಭಿವೃದ್ಧಿ ಮಾಡಿಕೊಳ್ಳುವುದರ ಮೂಲಕ ವೃತ್ತಿ ನೈಪುಣ್ಯತೆ ಪಡೆಯಲು ಸಾಧ್ಯವಾಗುತ್ತದೆ. ಇಂತಹ ಕಾರ್ಯಗಳಿಂದಾಗಿಯೇ ಬಿಜಿವಿಎಸ್ ನ ಕಲ್ಪನೆಯ ಭಾಗ ಎಫ್ ಸಿ. ಚೇಗರಡ್ಡಿ ಉದಯ ಗಾಂವಕರ್ ಶುಭಂಕರ್ ˌಕುಮಾರಸ್ವಾಮಿ ಹಾಗೂಡಾ.ನಿಂಗು ಸೊಲಗಿ ಹಾಗೂ ಇನ್ನುಳಿದ ಜ್ಞಾನವಂತರಿಂದ ವಠಾರ ಶಾಲೆಯ ಕಲ್ಪನೆ ಮೂರ್ತ ರೂಪ ಪಡೆದುಕೊಂಡಿತು. ಇದು ವೃತ್ತಿ ನೈಪುಣ್ಯತೆಗೆ ಪೂರಕವೂ ಆಯಿತು.
೨.ಉಪನ್ಯಾಸಗಳನ್ನ ವೆಬಿನಾರ್ ಫೇಸ್ ಬುಕ್ ಯೂಟ್ಯೂಬ್ ಮುಖಾಂತರ ನೀಡುವುದು:
ಶಿಕ್ಷಕರು ತಾವೇ ತಯಾರಿಸಿಕೊಂಡ ಶೈಕ್ಷಣಿಕ ಉಪಯುಕ್ತ ಮಾಹಿತಿಗಳ ಸರಣಿಯನ್ನ ನೀಡುವುದು. ಉದಾಹರಣೆಗೆ ಹಳ್ಳಿಯ ಸಂಸ್ಕೃತಿ ಬಿಂಬಿಸುವ ಜನಪದ ಸಂಸ್ಕೃತಿಯ ಅನಾವರಣ ಮಾಡುವುದು. ಸಾಹಿತ್ಯದ ವಿವಿಧ ಆಯಾಮಗಳ ಪರಿಚಯ(ಗಜಲ್ ಹಾಯ್ಕು ಜನಪದ ತತ್ವಪದ ಗ್ರಾಮೀಣ ಸಂಪ್ರದಾಯಗಳು) ಮಾಲಿಕೆ ಇಂಗ್ಲೀಷ್ ಸಮಾಜ ವಿಜ್ಞಾನಗಳಂತಹ ಪಾಠ/ಅಧ್ಯಾಯಗಳ ನಾಟಕ ರೂಪದ ನಿರೂಪಣೆ ಮಾಡುವುದು. ಇದರಿಂದ ಕೇವಲ ಕೆಲವರಿಗೆ ಮಾತ್ರವಲ್ಲದೇ ಮಕ್ಕಳಿಂದ ಹಿಡಿದು ಎಲ್ಲರಿಗೂ ಉಪಯುಕ್ತವಾಗುತ್ತದೆ.
೩.ವಿಷಯ ಪರಿಣಿತರೊಂದಿಗೆ ಚರ್ಚಾಕೂಟಗಳ ಏರ್ಪಾಡು: 
     ಶಿಕ್ಷಕರಾದ ನಾವು ಅಥವಾ ಇಲಾಖೆಯ ಜವಾಬ್ದಾರಿಯುತ ಸಂಪನ್ಮೂಲ ವ್ಯಕ್ತಿಗಳ ಸಹಕಾರದೊಂದಿಗೆ ನಾವು ಮಕ್ಕಳಿಗೆ ಕಲಿಕೆಯಲ್ಲಿ ಅನುಕೂಲವಾಗುವ ವಿಷಯಗಳನ್ನ ಚರ್ಚಿಸುವುದು. ಉದಾಹರಣೆಗೆ ಇಂಗ್ಲೀಷ್ ಅಥವಾ ಭಾಷಾ ಬೋಧನೆಗೆ ಸರಳ ರೀತಿಯಲ್ಲಿ ಬೋಧಿಸಬಹುದಾದ ವಿಧಾನಗಳುˌ ವ್ಯಾಕರಣ ಅಳವಡಿಕೆ ಹಾಗೂ ಪರಿಣಾಮಕಾರಿ ಸಂವಹನ ರೂಢಿಸುವಿಕೆ ಇತ್ಯಾದಿ.
೪.ವಾಟ್ಸಪ್ ಗ್ರುಪ್ಗಳ ಮುಖಾಂತರ ವಿಷಯಗಳ ಚರ್ಚೆ ಹಾಗೂ ಪರಸ್ಪರ ಪ್ರತಕ್ರಿಯೆ ಮಾಡುವುದು: 
   ಇದು ಶಿಕ್ಷಕರಾದವರಿಗೆ ಹೆಚ್ಚಿನ ಲಾಭವನ್ನ ನೀಡಬಲ್ಲ ಒಂದು ಮಾರ್ಗವಾಗಿದೆ. ಇಲ್ಲಿ ಹಂಚಿಕೊಳ್ಳುವ ಅಥವಾ ಮಾತನಾಡುವ ವಿಷಯ ಹೆಚ್ಚು ನಿಖರತೆಯಿಂದ ಕೂಡಿರಬೇಕು ವಸ್ತುನಿಷ್ಠವಾಗಿರಬೇಕು. ಇದರಿಂದ ಜ್ಞಾನಾರ್ಜನೆ ಜೊತೆ ಸಾಹಿತ್ಯ ಚಟುವಟಿಕೆಗಳು ಪರಸ್ಪರ ಪ್ರತಿಕ್ರಿಯೆ ಪಡೆದು ಕಲಿಯಲು ಸಾಧ್ಯವಾಗುತ್ತದೆ. ಹಾಗೆಯೇ ವಿಷಯ ಚರ್ಚಿಸುವವರು ಅಂತರ್ಜಾಲ ಅನುಭವಿಕರನ್ನ ಸಂಪರ್ಕಿಸಿ ಪ್ರಬುದ್ಧ ಪಾಂಡಿತ್ಯದೊಂದಿಗೆ ತಿಳಿಸುವುದರಿಂದ ಅವರ ವೃತ್ತಿ ನೈಪುಣ್ಯತೆ ಜೊತೆ ಪ್ರಗತಿ ಹಾಗೂ ಉಲ್ಲಾಸದಾಯಕ ಕಲಿಕೆಯುಂಟಾಗುತ್ತದೆ. ಇಲ್ಲಿ ನಾವು ಯಾವುದೋ ಒಂದು ರಾಜ್ಯ ಅಂತರಾಜ್ಯ ಮಟ್ಟದ ಸ್ಪರ್ಧೆ ಮತ್ತು ದಿನನಿತ್ಯದ ಕವಿತಾ ರಚನೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ.
೫.ವಠಾರ ಶಾಲೆಗಳ ಮತ್ತು ಸೃಜನಾತ್ಮಕ ಚಟುವಟಿಕೆಗಳ ನಿರ್ಮಾಣ: 
   ಇಲ್ಲಿ ಶಿಕ್ಷಕರಾದವರು ಮೊದಲೇ ಸೃಜನಾತ್ಮಕ ಚಟುವಟಿಕೆಗಳನ್ನ ಕಟ್ಟಿಕೊಂಡು ಕನಿಷ್ಠ ಕಲಿಕೆಯಿಂದ ಉತ್ಕೃಷ್ಟ ಕಲಿಕೆಯವರೆಗೆ ಯೋಜಿಸಿ ಮಕ್ಕಳಿದ್ದಲ್ಲಿಗೆ ಹೋಗಿ ಕಲಿಸಬೇಕಾಗುತ್ತದೆ. ಅಂದರೆ ಊರಿನ ಅಥವಾ ಪಟ್ಟಣದ ಬಯಲು ಜಾಗ ಮಂದಿರ ಮಠ ಓಣಿಗಳಲ್ಲಿ ಮಕ್ಕಳನ್ನ ಒಂದು ಕಡೆ ಸೂಕ್ತ ಸಾಮಾಜಿಕ ಅಂತರದಲ್ಲಿ ಕೂಡಿಸಿ ಕಲಿಸುವುದಾಗಿದೆ. ಇಲ್ಲಿ ಮಕ್ಕಳು ಆಡುತ್ತಾ ಕಲಿಯುತ್ತಾರೆ. ಅವರ ಆಸಕ್ತಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಇದರಿಂದ ಮಕ್ಕಳ ಕಲಿಕೆ ಶಿಕ್ಷಕರ ವೃತ್ತಿ ನೈಪುಣ್ಯತೆ ಹೆಚ್ಚಾಗುತ್ತದೆ. ಇದೊಂದು ವಿಶಿಷ್ಠ ಕಲ್ಪನೆಯಾಗಿದ್ದು ರಜಾ ಸಮಯದಲ್ಲಿ ಕಲಿಕೆಗೆ ಅನುಕೂಲಿಸಿ ಸಮಯ ಸದುಪಯೋಗ ಪಡಿಸುತ್ತದೆ.
೬. ವಿಷಯಾಂಶಗಳ ಆಡಿಯೋ ವಿಡಿಯೋ ತಯಾರಿಕೆ:
ಶಿಕ್ಷಕರು ಸೂಕ್ತ ಆಕರ ಗ್ರಂಥ ಹಾಗೂ ವಿಷಯಗಳ ಆಧಾರಗಳನ್ನಿಟ್ಟುಕೊಂಡು ಪರಿಣಾಮಕಾರಿಯಾದ ರೀತಿಯಲ್ಲಿ ಆಡಿಯೋ ಹಾಗೂ ವಿಡಿಯೋ ಪಾಠಗಳನ್ನ ತಯಾರಿಸಿಕೊಂಡು ಅಗತ್ಯವಿರುವವರಿಗೆ ಮೊಬೈಲ್ ಮುಖಾಂತರ ಹಂಚುವುದು. ಇವು ಮಕ್ಕಳಿಗೂ ಇತರ ಶಿಕ್ಷಕರಿಗೂ ಸಹಾಯವಾಗುತ್ತವೆ. ಈಗಾಗಲೇ ಅನೇಕ ಶಿಕ್ಷಕರು ಉತ್ತಮವಾದ ಆಡಿಯೋ ವಿಡಿಯೋಗಳನ್ನ ಯೂಟ್ಯೂಬ್ ನಲ್ಲಿ ಹಂಚಿದ್ದಾರೆ. ಇನ್ನಷ್ಟು ತಯಾರಿ ನಡಿಸಿದ್ದಾರೆ ಇಲ್ಲಿ ಎಲ್ಲರಿಗೂ ಕೈಗೆ ಸಿಗುವಂತ ರೀತಿಯಲ್ಲಿ ಉಪಯೋಗವಾಗುತ್ತಿವೆ. ಇದರಿಂದ ಸೃಜನಾತ್ಮಕವಾಗಿ ಪಾಠೋಪಕರಣ ತಯಾರಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ.
೭.. ನಾಟಕ ಪ್ರವಾಸಕಥನ ಕಾದಂಬರಿ ಪ್ರಬಂಧ ರಚನಾ ಕಾರ್ಯದಲ್ಲಿ ಪಾಲ್ಗೊಳ್ಳುವುದು:
  ಶಿಕ್ಷಕರು ಸಾಹಿತ್ತಿಕ ಕೃಷಿಯಲ್ಲಿ ಆಸಕ್ತಿ ಹೊಂದಿ ನಾಟಕ ಪ್ರವಾಸಕಥನ ಕಾದಂಬರಿ ಪ್ರಬಂಧ ರಚನಾ ಸ್ಪರ್ಧೆಗಳನ್ನ ಏರ್ಪಡಿಸುವ ಗುಂಪುಗಳಿದ್ದು ಅದರಲ್ಲಿ ಪಾಲ್ಗೊಳ್ಳುವುದು. ಇದರಿಂದ ಶಿಕ್ಷಕರಲ್ಲಿ ಜ್ಞಾನ ವೃತ್ತಿ ನೈಪುಣ್ಯತೆ ಹೆಚ್ಚಾಗಿ ಮಕ್ಕಳಿಗೂ ಶಿಕ್ಷಿತರಿಗೂ ಪ್ರಯೋಜನವಾಗುತ್ತವೆ. ಈ ರೀತಿಯ ಸಾಹಿತ್ತಿಕ ಚಟುವಟಿಕೆಗಳು ಶಿಕ್ಷಕರನ್ನ ಸದಾ ಸೃಜನಶೀಲರನ್ನಾಗಿಸಿ ಹೊಸ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತವೆ.

೮. ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದು:
ಶಿಕ್ಷಕರಾದವರು ಸದಾ ಹೆಚ್ಚಾಗಿ ಪುಸ್ತಕಗಳನ್ನು ಓದುತ್ತಿದ್ದರೆ ಜ್ಞಾನಾರ್ಜನೆಯಾಗುತ್ತದೆ. ಅಲ್ಲದೇ ವಿಷಯದಲ್ಲಿ ಅಧಿಕ ಪಾಂಡಿತ್ಯ ದೊರೆಯುತ್ತದೆ. ಇಲ್ಲಿ ಶಿಕ್ಷಕ ತಾನು ವಿವಿಧ ಬಗೆಯ ಸಾಹಿತ್ಯವನ್ನು ಓದುತ್ತಾ ತಾನೇ ಸ್ವತಃ ಬರೆಯಲು ಸಮರ್ಥನಾಗುತ್ತಾನೆ. ಇದು ಅವರ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ.

೯. ಪಾಠೋಪಕರಣಗಳ ತಯಾರಿಕೆ ಮಾಡಿಕೊಳ್ಳುವುದು:
   ಶಿಕ್ಷಕರು ತಮ್ಮ ಪಾಠಬೋಧನೆಗೆ ಉಪಯೋಗವಾಗುವ ಪಾಠೋಪಕರಣಗಳನ್ನ ತಯಾರು ಮಾಡಿಕೊಳ್ಳಲು ಸೂಕ್ತ ಸಮಯ ಇದಾಗಿದೆ. ಇಲ್ಲಿ ಶಿಕ್ಷಕರು ತಾವು ತಯಾರಿಸಿಕೊಳ್ಳುವ ಉಪಕರಣಗಳು ತಮ್ಮ ವೃತ್ತಿ ನೈಪುಣ್ಯತೆ ಹೆಚ್ಚಿಸುವುದಲ್ಲದೇ ಮಕ್ಕಳ ಕಲಿಕೆಯನ್ನು ಸರಳಗೊಳಿಸುತ್ತದೆ. ಬಿಡುವಿನ ಸಮಯದ ಸದ್ವಿೃನಿಯೋಗವಾಗುತ್ತದೆ.

೧೦.ಕಠಿಣ ವಿಷಯಗಳ ವಿಶೇಷ ಅಧ್ಯಯನ ಮಾಡುವುದು:
 ಶಿಕ್ಷಕರು ತಮ್ಮ ಬೋಧನೆಯ ಸಮಯದಲ್ಲಿ ಕಠಿಣ ಎಂದುಕೊಂಡಿರುವ ವಿಷಯವನ್ನು ಪರಿಲಿಣಿತರೊಂದಿಗೆ ಚರ್ಚಿಸಿ ಹಾಗೆಯೇ ಹೆಚ್ಚು ಗಮನ ಹರಿಸಿ ಓದಿ ಸರಳಗೊಳಿಸಿಕೊಳ್ಳಲು ಇದೊಂದು ಸದಾವಕಾಶವಾಗಿದೆ. ಇದರಿಂದಲೂ ವೃತ್ತಿ ನೈಪುಣ್ಯತೆ ಹೆಚ್ಚಾಗುತ್ತದೆ.

೧೧. ಶಿಕ್ಷಕರ ವೃತ್ತಿ ನೈಪುಣ್ಯತೆಯ ಆತ್ಮವಿಮರ್ಶೆ ಮಾಡಿಕೊಳ್ಳಲು ಸೂಕ್ತ ಸಂದರ್ಭ:
   ಶಿಕ್ಷಕರಿಗೆ ಇದು ನಿಜವಾಗಿಯೂ ಪ್ರಶ್ನಿಸಿಕೊಳ್ಳಲೇಬೇಕಾದ ಸಮಯ ಕಾರಣ ಕೊರೋನಾದಂತಹ ವಿಷಮ ಪರಿಸ್ಥಿತಿ ಇದಾಗಿದೆ.ನಾವು ಎಷ್ಟರಮಟ್ಟಿಛಗೆ ಬೋಧಿಸಲು ಸಮರ್ಥರಿದ್ದೇವೆ. ಇನ್ನೂ ಏನನ್ನು ಹೊಂದಬೇಫಕು ಮತ್ತು ಬದಲಾಯಿಸಿಕೊಳ್ಳಬೇಕೆಂದು ತಿಳಿಯಲೇಬೇಕಾಗಿದೆ. ಈ ದಿಸೆಯಲ್ಲಿ ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು.
೧೨. ಪ್ರಸ್ತುತತೆ ಹಾಗೂ ಬದಲಾವಣೆಗಳ ಅರಿವು ಪಡೆಯಬೇಕು(Update) :
ಸಾಕಷ್ಟು ಮುಂದುವರೆದಿರುವ ಈ ತಂತ್ರಜ್ಞಾನ ಯುಗದಲ್ಲಿ ನಾವೆಲ್ಲ ಶಿಕ್ಷಕರಾಗಿ Update ಆಗಬೇಕಿದೆ ಬದಲಾವಣೆ ಪ್ರಸ್ತುತತೆಯನ್ನು ತಿಳಿದು ಕಲಿಕೆ ಬೋಧನೆಯಲ್ಲಿ ತೊಡಗಬೇಕಿದೆ. ಇದು ನಮ್ಮ ಆದ್ಯ ಕರ್ತವ್ಯವಾಗಿದೆ.
   ಒಟ್ಟಾರೆಯಾಗಿ ಕೊರೋನಾ ಸಮಯದ ಈ ವಿಷಮ ಪರಿಸ್ಥಿತಿಯಲ್ಲಿ ಹೆಚ್ಚು ಕಾಲ ಮನೆಯಲ್ಲಿ ಸುರಕ್ಷಿತವಾಗಿದ್ದು ಮಾನಸಿಕ ಚಟುವಟಿಕೆಗಳಿಂದ ನಮ್ಮ ವೃತ್ತಿ ನೈಪುಣ್ಯತೆ ಹೆಚ್ಚುತ್ತದೆ."ಸೃಜನಶೀಲರು ಸೃಜನಶೀಲ ಚಟುವಟಿಕೆಗಳನ್ನೇ ಸೃಜಿಸಬಲ್ಲರು". ಹಾಗಾಗಿ ಅಂತಹ ವಿಶಿಷ್ಠ ಕೆಲಸಗಳಲ್ಲಿ ತೊಡುಗುವುದು ನಮ್ಮ ಆದ್ಯ ಪ್ರಾಧಾನ್ಯತೆಯಾಗಬೇಕು.
ಉಪಸಂಹಾರ: 
                     ಕೊರೋನಾದಂತಹ ಪ್ರಕ್ಷುಬ್ದ ಕಾಲದಲ್ಲಿ ಶಿಕ್ಷಕರು ಮಕ್ಕಳು ತಮ್ಮ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ಶಿಕ್ಷಕರು ವಿಚಾರವಂತರಾಗಿ ಹೊಸತನ ರೂಢಿಸಿಕೊಂಡು ಕಾರ್ಯ ಪ್ರವೃತ್ತರಾದರೆ ಎಲ್ಲ ಕಾರ್ಯಗಳು ಸುಗಮಗೊಳ್ಳುತ್ತವೆ. ಮಕ್ಕಳ ಕಲಿಕಾ ಸಮಯ ಹಾಳಾಗದಂತೆ ಶಿಕ್ಷಕರ ಜ್ಞಾನ ಮರೆಯದಂತಾಗಲು ಇಂತಹ ವಿಶಿಷ್ಠ ನೈಪುಣ್ಯ ಕೆಲಸಗಳಲ್ಲಿ ನಾವು ತೊಡಗಲೇ ಬೇಕು. "ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ" ಎಂಬಂತೆ ನೀವು ಕನಿಷ್ಠ ಪಕ್ಷ ನಮ್ಮ ವೃತ್ತಿ ನೈಪುಣ್ಯತೆಗಾದರೂ ಯೋಜಿಸಿಕೊಳ್ಳಲೇಬೇಕಾಗಿದೆ. ನಾವೆಲ್ಲ ದೈಹಿಕ ಮಾನಸಿಕ ಎರಡರಲ್ಲೂ ಯೋಧರಂತೆ ಸಿದ್ಧರಾಗಿರದಿದ್ದರೂ ಮಾನಸಿಕ ಸಿದ್ಧತೆಯಲ್ಲಿ ಯೋಧರಾಗಲೇಬೇಕಾಗಿದೆ. ಅದರಿಂದ ಮಕ್ಕಳು ಕುಟುಂಬ ಸಮಾಜ ಊರಿಗೆ ಸಹಾಯವಾಗುತ್ತದೆ.
        ನನ್ನ ಅಭಿಪ್ರಾಯದಲ್ಲಿ ವೃತ್ತಿ ನೈಪುಣ್ಯತೆ ಅನ್ನೋದೊಂದು ಗುರಿ ಇದ್ದಂತೆ ಅದಕ್ಕೆ ಹಲವಾರು ಮಾರ್ಗಗಳ ಮುಖಾಂತರ(ವಿಭಿನ್ನ ಕಾರ್ಯ ಚಟುವಟಿಕೆಗಳು) ಗಳಿಸಿ ಸಾಧಿಸಬಹುದಾಗಿದೆ. ನಾವು ಸದಾ ಸಕ್ರಿಯರಾಗೋಣ ಕಲಿಕೆ ಬೋಧನೆಯನ್ನ ಸಾರ್ಥಕಗೊಳಿಸೋಣ. ಆಗ ಇಲಾಖೆಯ ಸರಕಾರದ ಕಾರ್ಯಗಳು ಸಿದ್ದಿಸಿದಂತಾಗುತ್ತವೆ ಹಾಗೂ ವೈಯಕ್ತಿಕ ಅಭಿವೃದ್ಧಿ ಸಾಧನೆಯಾಗುತ್ತದೆ. "ಎಲ್ಲಿ ಶಿಕ್ಷಣ ಪ್ರಕಾಶಿಸುತ್ತದೆ ಅಲ್ಲಿ ಜ್ಞಾನದ ಬೆಳಕಿನ ಜೊತೆ ಜೀವನದ ಪ್ರಖರತೆ ಕಾಣುತ್ತದೆ". ನಾವೆಲ್ಲ ವೃತ್ತಿಗೆ ಬದ್ಧರಾಗಿ ಆಸಕ್ತಿ ತೋರಿಸಿ ಶೈಕ್ಷಣಿಕ ಚಟುವಟಿಕೆಗಳನ್ನ ಸಾಕಾರಗೊಳಿಸೋಣ. ಇದರಿಂದ ದೇಶದ ಭವಿಷ್ಯ ಉಜ್ವಲಗೊಳ್ಳುತ್ತದೆ. "The honesty and sincere effort of teachers can lead society to the highest peak of mountain". ಹಾಗಾಗಿ ನಾವೆಲ್ಲ ಶ್ರಮಿಸೋಣ ಮಕ್ಕಳ ಭವಿಷ್ಯವನ್ನ ಬೆಳಗಿಸೋಣ.

ಮಂಗಳವಾರ, ಜುಲೈ 28, 2020

4th ಕನ್ನಡ ಸೇತುಬಂಧ ಮತ್ತು ಸಾಮರ್ಥ್ಯಗಳ ಪಟ್ಟಿ

click here To watch

ಅಸೈನ್ ಮೆಂಟ್_8

ಅಸೈನ್ಮೆಂಟ್ 10

ಅಸೈನ್ಮೆಂಟ್_9

ಸೋಮವಾರ, ಜುಲೈ 27, 2020

ಅಸೈನ್ಮೆಂಟ್_7

ಅಸೈನ್ಮೆಂಟ್_6

ಅಸೈನ್ಮೆಂಟ್_5

ಅಸೈನ್ಮೆಂಟ್_4

ಅಸೈನ್ಮೆಂಟ್_3

ಅಸೈನ್ಮೆಂಟ್ 2

ಅಸೈನ್ಮೆಂಟ್ 1

8th_std_maths_all_chapter_notes_kan_version_

click here to download pdf